• A
  • A
  • A
ಬಾಳೆಯ ನಾರಿನಿಂದ sanitary pad.... ಏನಿದರ ವಿಶೇಷ?

ಮಹಿಳೆಯರು ತಿಂಗಳ ಆ ದಿನಗಳಲ್ಲಿ ತುಂಬಾ ಸ್ವಚ್ಛವಾಗಿರುವುದು ಹಾಗೂ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಆದರೆ ಇಂದು ಕೂಡ ದೇಶದ ಹೆಚ್ಚಿನ ಕಡೆಗಳಲ್ಲಿ, ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರು ಋತುಸ್ರಾವದ ಸಂದರ್ಭದಲ್ಲಿ ಬಟ್ಟೆಯನ್ನು ಬಳಕೆ ಮಾಡುತ್ತಾರೆ. ಇದು ಸ್ವಚ್ಛವಾಗಿದ್ದರೆ ಸರಿ, ಸ್ವಚ್ಛತೆ ಕಾಪಾಡದೆ ಇದ್ದರೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.


ಗ್ರಾಮಾಂತರ ಪ್ರದೇಶಗಳಲ್ಲಿ ಹಳ್ಳಿಯ ಜನರಿಗೆ ಸ್ಯಾನಿಟರಿ ಪ್ಯಾಡ್‌ ಖರೀದಿ ಮಾಡುವಷ್ಟು ಶಕ್ತಿ ಇರೋದಿಲ್ಲ. ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವ ಸಲುವಾಗಿ ಸಂಸ್ಥೆಯೊಂದು ಹೊಸ ಸ್ಯಾನಿಟರಿ ಪ್ಯಾಡ್‌ ನಿರ್ಮಾಣ ಮಾಡಿ ಜನರಿಗೆ ನೀಡುತ್ತಿದೆ. ಎಂಐಟಿ ಮೂವರು ಗ್ರಾಜುಯೇಟ್ಸ್‌ ಸ್ಥಾಪನೆ ಮಾಡಿದ ಸಾಮಾಜಿಕ ಉದ್ಯಮ ಸಂಸ್ಥೆ ಸಾಥಿ ಇದೀಗ ಬಾಳೆಯ ನಾರಿನಿಂದ ಮಾಡಿದಂತಹ ಮಿಲಿಯನ್‌ ಸಂಖ್ಯೆಗಳಷ್ಟು ಸ್ಯಾನಿಟರಿ ಪ್ಯಾಡ್‌ಗಳನ್ನು ನಿರ್ಮಾಣ ಮಾಡಿ ಜಾರ್ಖಂಡ್‌ನ ಹಳ್ಳಿ ಪ್ರದೇಶದ ಮಹಿಳೆಯರಿಗೆ ನೀಡುತ್ತಿದೆ.

ಈ ಸಂಸ್ಥೆ ಎನ್‌ಜಿಓದೊಂದಿಗೆ ಕೈ ಜೋಡಿಸಿಕೊಂಡು ಗ್ರಾಮಾಂತರ ಪ್ರದೇಶದ ಹಾಗೂ ನಗರದಲ್ಲಿ ಸ್ಲಮ್‌ನಲ್ಲಿರುವ ಮಹಿಳೆಯರಿಗೆ ಒಂದು ವರ್ಷದಲ್ಲಿ ಒಂದು ಮಿಲಿಯನ್‌ ಪ್ಯಾಡ್‌ ವಿತರಣೆ ಮಾಡುತ್ತಿದೆ ಎಂದು ಸಂಸ್ಥೆಯ ಸಿಇಒ ಕ್ರಿಸ್ಟಿನ್‌ ಕಾಗೆಸ್ಟು ತಿಳಿಸಿದ್ದಾರೆ.

ಏನಿದರ ವಿಶೇಷತೆ?
ಇದು ಪಕ್ಕಾ ನ್ಯಾಚುರಲ್‌ ಸ್ಯಾನಿಟರಿ ಪ್ಯಾಡ್‌ ಆಗಿದೆ. ಇದನ್ನು ತಯಾರಿಸಲು ಯಾವುದೆ ಕೆಮಿಕಲ್‌ ಬಳಕೆ ಮಾಡಲಾಗುವುದಿಲ್ಲ.
ಇದನ್ನು ಜೈವಿಕ ಬಾಳೆ ನಾರಿನಿಂದ ಮಾಡಲಾಗಿದೆ. ಇದು ಹೆಚ್ಚು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದೆ.
ಇದನ್ನು ತಯಾರು ಮಾಡಲು ಬಳಕೆ ಮಾಡಿದ ಎಲ್ಲಾ ವಸ್ತುಗಳು ಜೈವಿಕ ಹಾಗೂ ವಿಘಟನೀಯ ವಸ್ತುವಾಗಿದೆ. ಇದರಿಂದ ಯಾವುದೆ ಅಡ್ಡ ಪರಿಣಾಮ ಇರಲಾರದು.
ಇದನ್ನು ಬಳಕೆ ಮಾಡಿದ ನಂತರ ಆರು ತಿಂಗಳೊಳಗೆ ಅದು ಡಿಕಂಪೋಸ್‌ ಆಗುತ್ತದೆ. ಇದನ್ನು ಗೊಬ್ಬರವನ್ನಾಗಿ ಬಳಕೆ ಕೂಡ ಮಾಡಬಹುದು.
ತುಂಬಾ ಸಾಫ್ಟ್‌ ಹಾಗೂ ಹೆಚ್ಚು ಹೀರಿಕೊಳ್ಳುವ ಶಕ್ತಿ ಹೊಂದಿರುವ ಈ ಪ್ಯಾಡ್‌ಗಳನ್ನು ಬಳಕೆ ಮಾಡುವುದರಿಂದ ಯಾವುದೆ ಇರಿಟೇಶನ್‌ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು