• A
  • A
  • A
ನಾನು ಅಜ್ಜಿ ಆಗೋದು ಯಾವಾಗ... ಅಮ್ಮನ ಪ್ರಶ್ನೆಗೆ ಯಶ್ ಹೇಳಿದ್ದೇನು...?

ರಾಕಿಂಗ್​ ಸ್ಟಾರ್​ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್​​ ಮದುವೆಯಾಗಿ ಬರೋಬ್ಬರಿ ಎರಡು ವರ್ಷ ಕಳೆಯುತ್ತ ಬಂತು. ಆದರೆ, ಇದುವರೆಗೂ ಇವರಿಂದ ಗುಡ್​ ನ್ಯೂಸ್​ ಬಂದಿಲ್ಲ ಎನ್ನುವುದು ಅವರ ಅಭಿಮಾನಿಗಳಲ್ಲಿ ಮೂಡಿಸಿರುವ ನಿರಾಸೆ ಅಷ್ಟಿಷ್ಟಲ್ಲ.


ಹೌದು, ಯಶ್​ ಹಾಗೂ ರಾಧಿಕಾ, ಅಪ್ಪ-ಅಮ್ಮ ಆಗೋದು ಯಾವಾಗ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿದೆ. ಸಾಕಷ್ಟು ಬಾರಿ ಯಶ್​ ಅವರಿಗೇ ಈ ಪ್ರಶ್ನೆ ಕೇಳಲಾಗಿದೆ. ಇದುವರೆಗೂ ಇಂತಹದೊಂದು ಪ್ರಶ್ನೆ ಕೇವಲ ಯಶ್ ಅಭಿಮಾಗಳಲ್ಲಿ ಮಾತ್ರ ಇದೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಸ್ವತಃ ಯಶ್ ಅವರ ತಾಯಿಯೇ ತಾವು ಅಜ್ಜಿ ಆಗೋದು ಯಾವಾಗ ಎಂದು ಕೇಳುತ್ತಿದ್ದಾರೆ.
ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ವೇಳೆ ಕಾಲ್​ ಮಾಡಿದ ಯಶ್ ಅವರ ತಾಯಿ, ನಾನು ಅಜ್ಜಿ ಆಗೋದು ಯಾವಾಗ ಎಂದು ಕೇಳಿದ್ದಾರೆ. ಅಮ್ಮನ ಈ ಪ್ರಶ್ನೆಗೆ ಯಶ್ ಉತ್ತರ ಏನು ಎಂಬುದು ಇಂದು ರಾತ್ರಿ ಪ್ರಸಾರವಾಗಲಿರುವ ಫುಲ್ ಎಪಿಸೋಡ್​ನಲ್ಲಿ ತಿಳಿಯಲಿದೆ. ಅಲ್ಲಿವರೆಗೂ ವೇಟ್​ ಆ್ಯಂಡ್​ ವಾಚ್​​...


Copyright © 2016 Ushodaya Enterprises Pvt. Ltd., All Rights Reserved.

For Digital Marketing Enquiries Contact: 9000180611, 040-23318181
Email: marketing@eenadu.net | Powered By Vishwak