• A
  • A
  • A
ಮತ್ತೆ ಕಿರುತೆರೆಯತ್ತ ಶಿವರಾಜಕುಮಾರ್...ಶೋ ಯಾವುದು ಗೊತ್ತಾ?

ತೆಲುಗಿನಲ್ಲಿ ನಟ ರಾನಾ ದಗ್ಗುಬಾಟಿ, `ನಂ.1 ಯಾರಿ ರಾನಾ' ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಗೊತ್ತಿರಬಹುದು. ಈ ಶೋ ಇದೀಗ ಕನ್ನಡಕ್ಕೂ ಕಾಲಿಟ್ಟಿದ್ದು, ಅದನ್ನು ಶಿವರಾಜಕುಮಾರ್ ಅವರು ನಡೆಸಿಕೊಡಲಿದ್ದಾರೆ.


ಹೌದು, `ಕಿಕ್' ನಂತರ ಶಿವರಾಜಕುಮಾರ್‌ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿಯಾಗಿದ್ದು, ಈ ಬಾರಿ ಟಾಕ್‍ ಶೋ ನಡೆಸಿಕೊಡುತ್ತಿರುವುದು ವಿಶೇಷ. `ಯಾರಿ ನಂ 1 ಶಿವಣ್ಣ' ಎಂಬ ಹೆಸರಿನ ಈ ಟಾಕ್ ಶೋದಲ್ಲಿ, ಶಿವರಾಜಕುಮಾರ್ ಅವರು ಚಿತ್ರರಂಗದ ಮಂದಿಯ ಜೊತೆ ಮಾತುಕತೆ ನಡೆಸಲಿದ್ದಾರೆ.. ಹೆಸರೇ ಹೇಳುವಂತೆ, ಇದರಲ್ಲಿ ಅವರು ಸ್ನೇಹದ ಕುರಿತಾಗಿ ಮಾತನಾಡಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ಪ್ರತಿ ವಾರ ಒಬ್ಬೊಬ್ಬರು ಸೆಲಬ್ರಿಟಿಗಳು ಭಾಗವಹಿಸಿ, ತಮ್ಮ ಬಗ್ಗೆ ಮತ್ತು ಸ್ನೇಹದ ಬಗ್ಗೆ ಮಾತನಾಡಲಿದ್ದಾರೆ.

ಇತ್ತೀಚೆಗೆ `ಯಾರಿ ನಂ.1 ಶಿವಣ್ಣ'ದ ಪ್ರೋಮೋ ಶೂಟ್ ಡಿಸ್ಟ್ರಿಕ್ಟ್ ಬಾರ್‌ನಲ್ಲಿ ನಡೆದಿದ್ದು, ಕಾರ್ಯಕ್ರಮವು ಸದ್ಯದಲ್ಲೇ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು