• A
  • A
  • A
ಟಾಲಿವುಡ್​ ಪ್ರಿನ್ಸ್​ ಜತೆ ಸ್ಯಾಂಡಲ್​ವುಡ್ ಪ್ರಿನ್ಸಸ್​ ರೊಮ್ಯಾನ್ಸ್​​​​...! ​

ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಅದೃಷ್ಟ ತುಂಬಾ ಚೆನ್ನಾಗಿದೆ ಅನ್ನಿಸುತ್ತೆ. ಈ ಚೆಲುವೆ ನಟಿಸಿದ ಎಲ್ಲ ಚಿತ್ರಗಳು ಕೂಡಾ ಸೂಪರ್ ಹಿಟ್ ಆಗುತ್ತಿವೆ. ಅಷ್ಟೇ ಅಲ್ಲ, ದೊಡ್ಡ ದೊಡ್ಡ ಸ್ಟಾರ್​ ನಟರ ಜತೆ ಅಭಿನಯಿಸುವ ಅವಕಾಶ ಒದಗಿ ಬರುತ್ತಿವೆ.


ಈ ಮೇಲಿನ ಮಾತಿಗೆ ಬಲ ನೀಡುವಂತೆ ಸದ್ಯ ಟಾಲಿವುಡ್ ಪ್ರಿನ್ಸ್​ ಮಹೇಶ್​ ಬಾಬು ಅವರ ಮುಂದಿನ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸುಕುಮಾರ್​ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮುಂದಿನ ವರ್ಷ ಈ ಪ್ರಾಜೆಕ್ಟ್ ಸೆಟ್ಟೇರಲಿದ್ದು, ಸ್ಟಾರ್ ಕಾಸ್ಟಿಂಗ್​ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ಇನ್ನು ರಶ್ಮಿಕಾ ಚಲೋ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ರು. ಗೀತ ಗೋವಿಂದಂ ಚಿತ್ರದ ಮೂಲಕ ತೆಲುಗು ನಾಡಲ್ಲಿ ಕೀರ್ತಿ ಪತಾಕೆ ಹಾರಿಸಿದ್ರು. ಮೂರನೇ ಚಿತ್ರ ದೇವದಾಸ ಮೂಲಕ ಅಲ್ಲಿಯ ಜನರಿಗೆ ಮತ್ತಷ್ಟು ಹತ್ತಿರವಾದರು. ಈಗ ಮಹೇಶ್ ಬಾಬು ಜತೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು