• A
  • A
  • A
ಹಾಸ್ಯ ನಟ ವಠಾರ ಮಲ್ಲೇಶ್ ವಿಧಿವಶ

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್​​ ಹಾಸ್ಯ ನಟ ಮಲ್ಲೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.


42 ವರ್ಷದ ಮಲ್ಲೇಶ್ ಬಹಳ ದಿನಗಳಿಂದ ಕಿಡ್ನಿ ವೈಫಲ್ಯ ಹಾಗೂ ಬ್ರೈನ್ ಸ್ಟ್ರೋಕ್​ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಲ್ಲೇಶ್ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಲ್ಲೇಶ್ ನಿಜ ಜೀವನದಲ್ಲೂ ಬಹಳ ಸರಳ ಹಾಗೂ ಮುಗ್ಧ ವ್ಯಕ್ತಿಯಾಗಿದ್ದರು. ಸುಮಾರು 125 ಕ್ಕೂ ಹೆಚ್ಚು ಸಿನಿಮಾ ಹಾಗೂ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಇವರು ವಠಾರ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರಿಂದ 'ವಠಾರ ಮಲ್ಲೇಶ್' ಎಂದೇ ಫೇಮಸ್ ಆಗಿದ್ದರು.
ಪತ್ನಿ ಹಾಗೂ ಮೂವರು ಮಕ್ಕಳನ್ನು ಮಲ್ಲೇಶ್ ಅಗಲಿದ್ದಾರೆ. ಬನ್ನೇರುಘಟ್ಟದ ಅವರ ಸ್ವಗೃಹದಲ್ಲಿ ಇಂದು ಸಂಜೆ 5 ಗಂಟೆವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ಮಲ್ಲೇಶ್ ನಿಧನಕ್ಕೆ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು