• A
  • A
  • A
ಪ್ರಭಾಸ್‌-ನಿಹಾರಿಕಾ ವೆಡ್ಡಿಂಗ್ ರೂಮರ್‌: ನಟ ಚಿರಂಜೀವಿ ಹೇಳೋದೇನು?

ಹೈದರಾಬಾದ್: ಟಾಲಿವುಡ್‌ ಸೂಪರ್ ಸ್ಟಾರ್‌ ಪ್ರಭಾಸ್‌ ಮದುವೆ ವಿಚಾರ ಆಗಾಗ ಸದ್ದು ಮಾಡ್ತಿರುತ್ತೆ. ನಟಿ ಅನುಷ್ಕಾ ಶೆಟ್ಟಿ ಜತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎನ್ನುವ ರೂಮರ್ ಸಾಕಷ್ಟು ದಿನಗಳಿಂದ ರೌಂಡ್‌ ಹೊಡೆಯುತ್ತಲೇ ಇದೆ.


ಇದೀಗ ಮತ್ತೆ ಪ್ರಭಾಸ್ ಮ್ಯಾರೇಜ್ ಮ್ಯಾಟರ್‌ ಸದ್ದು ಮಾಡ್ತಿದೆ. ಹಾಗಂತ ಈ ಬಾರಿ ಅವರು ಹೆಸರು ಕೇಳಿ ಬಂದಿದ್ದು ಅನುಷ್ಕಾ ಜತೆಯಲ್ಲ. ಬದಲಾಗಿ ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರನ ಮಗಳು ನಿಹಾರಿಕಾ ಜತೆ.

ಹೌದು, ಪ್ರಭಾಸ್‌ ಅವರು ನಿಹಾರಿಕಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಕೇಳಿ ಬರುತ್ತಿತ್ತು. ಪ್ರಭಾಸ್ ಮದುವೆ ವಿಚಾರ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತ್ತು. ಆದರೆ, ರೂಮರ್‌ನ್ನು ನಟ ಚಿರಂಜೀವಿ ತಳ್ಳಿ ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇಂತಹ ಆಧಾರವಿಲ್ಲದ ವದಂತಿಗಳನ್ನು ಹಬ್ಬಿಸಬೇಡಿ. ನಿಹಾರಿಕಾ ಸದ್ಯ ಅವಳ ಚಿತ್ರಗಳ ಮೇಲೆ ಗಮನ ಹರಿಸಿದ್ದಾಳೆ. ಸದ್ಯಕ್ಕಂತು ಅವಳ ಮದುವೆ ವಿಚಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು