• A
  • A
  • A
ಬಿಗ್‌ ವೇದಿಕೆಯಲ್ಲಿ ನಿವೇದಿತಾಗೆ ಕೈ ಮುಗಿದ ಕಿಚ್ಚ...ಕಾರಣ!?

ಶನಿವಾರ ಬಿಗ್‌ಬಾಸ್ ಮನೆಯಲ್ಲಿ ನಡೆದ ವಾರದ ಕಥೆ ಕಿಚ್ಚನ ಜತೆ ಎಪಿಸೋಡ್‌ ತುಂಬಾ ಮಜವಾಗಿತ್ತು.


ಎಂದಿನಂತೆ ನಿನ್ನೆಯ ಬಿಗ್‌ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಎಂಟ್ರಿ ಕೊಟ್ಟಿದ್ದರು. ಪ್ರಾರಂಭದಲ್ಲಿಯೇ ಸ್ಪರ್ಧಿಗಳ ಕಾಲೆಳೆದ್ರು ಸುದೀಪ್‌. ಕಿಚ್ಚನ ಬರುವಿಕೆಗೆ ಕಾತುರದಿಂದ ಕಾಯ್ದು ಕುಳಿತಿದ್ದ ಸ್ಪರ್ಧಿಗಳು, ಸುದೀಪ್ ಅವರಿಗೆ ಸರ್‌ಪ್ರೈಸ್ ನೀಡಲು ದಿಂಬುಗಳಿಂದ ಮುಖ ಮುಚ್ಚಿಕೊಂಡಿದ್ದರು. ಆದರೆ, ಯಾರಾರು ಎಲ್ಲೆಲ್ಲಿ ಕುಳಿದಿದ್ದಾರೆ ಎಂಬುದನ್ನು ಹೇಳಿದ ಸುದೀಪ್‌, ಜೆ ಕೆ ಇದ್ದಲ್ಲಿ ಶೃತಿ ಕುಳಿತಿರುತ್ತಾರೆ ಹಾಗೂ ಶೃತಿ ಕಾಣುವ ಹಾಗೆ ಚಂದನ್ ಆಸೀನರಾಗಿರುತ್ತಾನೆ ಎಂದು ಚುಚ್ಚಿದ್ರು.


ಬಳಿಕ ಈ ವಾರದಲ್ಲಿ ಮನೆಗೆ ತಮ್ಮ ಮನೆಯವರು ಆಗಮಿಸಿದ್ದ ವೇಳೆ ಉಂಟಾದ ಅನುಭವವನ್ನು ಸ್ಪರ್ಧಿಗಳಿಂದ ಕೇಳಿದ್ರು ಸುದೀಪ್‌. ಈ ಸಂದರ್ಭದಲ್ಲಿಯೂ ರಿಯಾಜ್ ಹಾಗೂ ದಿವಾಕರ್ ಅವರನ್ನು ಕಾಲೆಳೆದ್ರು. ಹೀಗೆ ಮಾತುಗಳನ್ನು ಮುಂದುವರೆಸಿದ ಕಿಚ್ಚ, ಕೂಡಲೇ ನಿವೇದಿತಾ ಅವರನ್ನು ಹೊಗಳೋಕೆ ಶುರುಮಾಡಿದ್ರು. ಅದಕ್ಕೆ ಕಾರಣ ದಿವಾಕರ್‌-ಮಮತಾ ದಂಪತಿ ಭೇಟಿಗೆ ನಿವೇದಿತಾ ನೀಡಿದ ಪರಿಶ್ರಮ.

''ನೀವು ಯಾವ ಸ್ಪರ್ಧಿಯು ಮಾಡದ ಕೆಲಸವನ್ನು ಮಾಡಿದ್ರಿ. ಇಂತಹ ಕೆಲಸ ಮಾಡುತ್ತೀರಿ ಎಂದು ಮನೆಯ ಯಾವ ಸ್ಪರ್ಧಿಯೂ ಕೂಡ ಅಂದುಕೊಂಡಿರಲಿಲ್ಲ. ಆದರೆ, ಎಲ್ಲರೂ ಬೆರಗಾಗುವಂತೆ ನೀವು 30 ನಿಮಿಷಗಳವರೆಗೆ ಮಡಿಕೆ ಒಡೆಯದಂತೆ ನೋಡಿಕೊಂಡ್ರಿ. ನಿಜವಾಗಿಯೂ ನೀವು ಗ್ರೇಟ್‌, ನಿಮ್ಮ ಪರಿಶ್ರಮ, ತ್ಯಾಗಕ್ಕೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದ ಸುದೀಪ್‌, ತಮ್ಮ ಎರಡು ಕೈಗಳನ್ನು ಜೋಡಿಸಿ ನಿವೇದಿತಾ ಅವರಿಗೆ ವಂದಿಸಿದ್ರು.

ಚಿಕ್ಕವಳಾದ್ರೂ ತ್ಯಾಗ ದೊಡ್ಡದು... ನಿವ್ವಿಯ ಕೆಲಸಕ್ಕೆ ಮೂಕರಾದ ಮನೆಯ ಸದಸ್ಯರು!

ದಿವಾಕರ್ ಪತ್ನಿ ಬಿಗ್‌ಬಾಸ್‌ ಮನೆಗೆ ಆಗಮಿಸಿದ್ದ ವೇಳೆ ಬಿಗ್‌ಬಾಸ್ ನೀಡಿದ್ದ ಟಾಸ್ಕ್‌ ಅನ್ವಯ ಏತದ ಮೇಲೆ ಇರಿಸಲಾಗಿದ್ದ ಮಡಿಕೆಯನ್ನು ಕೆಳಗೆ ಬೀಳಿಸದಂತೆ ನೋಡಿಕೊಂಡಿದ್ರು ನಿವೇದಿತಾ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು