• A
  • A
  • A
ನನಸಾಗದ ಕನಸು...ಬಿಗ್‌ಬಾಸ್‌ ಮನೆಯಿಂದ ರಿಯಾಜ್‌ ಎಲಿಮಿನೇಟ್‌!

ಕನ್ನಡದ ಬಿಗ್‌ಬಾಸ್ ಸೀಸನ್‌ 5 ಯಶಸ್ವಿಯಾಗಿ 13 ನೇ ವಾರವನ್ನು ಪೂರೈಸಿ 14 ನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ಇದೇ ಸಂದರ್ಭದಲ್ಲಿ ಓರ್ವ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸಿದೆ.


ಹೌದು, ಈ ವಾರಕ್ಕೆ ಬಿಗ್‌ಬಾಸ್‌ ಮನೆಯಿಂದ ಓರ್ವ ಸ್ಪರ್ಧಿ ಹೊರನಡೆದರು. ಎಂದಿನಂತೆ ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಎಪಿಸೋಡಿಯನಲ್ಲಿ ಎಲಿಮಿನೇಟ್‌ ಪ್ರಕ್ರಿಯೆ ನಡೆಯಿತು. ಮನೆಯವರ ಯೋಗಕ್ಷೇಮ ವಿಚಾರಿಸಿಕೊಂಡ ಸುದೀಪ್‌, ನೇರವಾಗಿ ಎಲಿಮಿನೇಟ್‌ ಕೆಲಸವನ್ನು ಕೈಗೆತ್ತಿಕೊಂಡರು.


ಈ ವಾರಕ್ಕೆ ಮನೆಯಿಂದ ಹೊರ ಹೋಗಲು ನಿವೇದಿತಾ ಗೌಡ, ಶೃತಿ, ಜೆಕೆ, ಚಂದನ್‌ , ರಿಯಾಜ್ ಹಾಗೂ ಸಮೀರ್ ಆಚಾರ್ಯ ಅವರು ನಾಮಿನೇಟ್ ಆಗಿದ್ದರು. ಈ ಆರು ಜನರಲ್ಲಿ ಓರ್ವ ಸ್ಪರ್ಧಿ ಮನೆಯಿಂದ ಹೊರ ಹೋಗಬೇಕಾಯಿತು. ಮೊದಲಿಗೆ ನಿವೇದಿತಾ ಅವರನ್ನು ಸೇಫ್ ಮಾಡಿದ ಸುದೀಪ್‌ ಅವರು, ಬಳಿಕ ಚಂದನ್‌, ಜೆಕೆ , ಶೃತಿ ಅವರನ್ನು ಸೇಫ್ ಮಾಡಿದ್ರು. ಕೊನೆಯದಾಗಿ ಸಮೀರ್ ಹಾಗೂ ರಿಯಾಜ್‌ ಉಳಿದುಕೊಂಡ್ರು. ಈ ಇಬ್ಬರಲ್ಲಿ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮನೆಯ ಸದಸ್ಯರಲ್ಲಿ ಕಾಣಿಸಿಕೊಂಡಿತ್ತು. ಕೊನೆಯದಾಗಿ ರಿಯಾಜ್ ಔಟ್‌ ಆದ್ರು.

ಕನಸು ಕನಸಾಗಿಯೇ ಉಳಿಯಿತು :

ರಿಯಾಜ್ ದೊಡ್ಡ ಕನಸಿನೊಂದಿಗೆ ಬಿಗ್‌ಬಾಸ್‌ ಮನೆಗೆ ಬಂದಿದ್ದರು. ಬಿಗ್‌ಬಾಸ್‌ ವಿನ್‌ ಆಗಿ ಅದರ ಹಣದಿಂದ ಸುಂದರವಾದ ಮನೆ ಕಟ್ಟಬೇಕೆಂದು ಅಸೆ ಪಟ್ಟಿದ್ದರು. ಅದಕ್ಕಾಗಿ ತುಂಬಾ ಕಷ್ಟಪಟ್ಟು ಆಟ ಆಡುತ್ತಿದ್ದರು ಕೂಡ. ಆದರೆ, ಅವರ ಕನಸಿಗೆ ನಿನ್ನೆ ಬ್ರೇಕ್ ಬಿದ್ದಿತು. ಬಿಗ್‌ಬಾಸ್ ಗೆಲುವಿಗೆ ಇನ್ನೆರಡು ವಾರಗಳು ಬಾಕಿಯಿರುವಾಗಲೇ ಅವರು ಎಲಿಮಿನೇಟ್ ಆಗಬೇಕಾಯಿತು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ನಾಡಹಬ್ಬ

  ಪ್ರಮುಖ ನಗರಗಳು