• A
  • A
  • A
10 ಕೋಟಿ ಆಫರ್​ಗೂ ಡೋಂಟ್​ ಕೇರ್​...'ಚಂಬಲ್'​ನ ಉದ್ದೇಶ ಕೇಳಿದ್ರೆ ನೀವು ಸೆಲ್ಯೂಟ್ ಮಾಡ್ತೀರಾ!!

ಇತ್ತೀಚೆಗೆ ಕನ್ನಡ ಚಿತ್ರಗಳು ಭಾರೀ ಸದ್ದು ಮಾಡುತ್ತಿವೆ. ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆಗೆ ಯಶ್ ಕೆಜೆಎಫ್​ ಚಿತ್ರದ ರೈಟ್ಸ್​ ಹಿಂದಿಗೆ ಮಾರಾಟವಾಗಿರುವುದು.

pic :twitter


ಈಗ ಮತ್ತೊಂದು ಕನ್ನಡ ಚಿತ್ರಕ್ಕೆ ಬರೋಬ್ಬರಿ 10 ಕೋಟಿ ಆಫರ್ ಬಂದಿದೆ. ಆದರೆ, ಇದನ್ನು ಸಾರಾಸಗಟವಾಗಿ ನೋ ಎಂದಿದೆ ಆ ಚಿತ್ರತಂಡ. ಅಷ್ಟಕ್ಕೂ ಈ ಕೋಟಿ ಲೆಕ್ಕದಲ್ಲಿ ಆಫರ್ ಮಾಡಿರುವರು ಯಾರು? ಇಂತಹ ದೊಡ್ಡ ಆಫರ್ ತಳ್ಳಿ ಹಾಕಿರುವ ಕನ್ನಡದ ಆ ಚಿತ್ರ ಯಾವುದು ಅಂತೀರಾ ? ಇಲ್ಲಿದೆ ನೋಡಿ ಹೆಮ್ಮೆಯಿಂದ ಕೂಡಿದ ವಿಷಯ...
ಹೌದು, ನಾವು ಹೇಳುತ್ತಿರುವುದು ಕನ್ನಡದ ಚಂಬಲ್ ಚಿತ್ರದ ಬಗ್ಗೆ. ಸತೀಶ್ ನೀನಾಸಂ ನಟಿಸಿರುವ ಚಂಬಲ್ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಅದಾಗಲೇ ಈ ಚಿತ್ರಕ್ಕೆ ಭಾರೀ ಬೇಡಿಕೆ ಬಂದಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಪ್ರತಿಷ್ಠಿತ ನೆಟ್​ಫ್ಲಿಕ್ಸ್​ ಸಂಸ್ಥೆ ಈ ಚಿತ್ರದ ರೈಟ್ಸ್​ ಕೊಂಡುಕೊಳ್ಳಲು ಓಡೋಡಿ ಬಂದಿದೆ. ಕೇವಲ ಚಂಬಲ್​ ಚಿತ್ರದ ಟ್ರೈಲರ್ ನೋಡಿದ ನೆಟ್​ಫ್ಲಿಕ್ಸ್​, ಶತಾಯಗತಾಯ ಚಿತ್ರದ ಪ್ರಸಾರವನ್ನು ನಾವೇ ಮಾಡಿ ತೀರುತ್ತೇವೆ ಎಂದು ಡಿಸೈಡ್ ಮಾಡಿ, 10 ಕೋಟಿ ರೂಪಾಯಿ ಆಫರ್ ಮಾಡಿದೆ. ಆದರೆ, ಇದನ್ನು ಚಿತ್ರತಂಡ ಸೈಲೆಂಟ್ ಆಗಿಯೇ ನೋ ಎಂದಿದೆ.

ನೆಟ್​ಫ್ಲಿಕ್ಸ್​ 'ಚಂಬಲ್' ಚಿತ್ರವನ್ನು ಥಿಯೇಟರ್​ನಲ್ಲಿ ರಿಲೀಸ್ ಮಾಡದೇ ಕೇವಲ ತಾವಷ್ಟೆ ಪ್ರಸಾರ ಮಾಡುವುದಾಗಿ ಹೇಳಿಕೊಂಡಿತ್ತು.ಇದಕ್ಕಾಗಿ 10 ಕೋಟಿ ಹಣ ಕೊಡುವುದಾಗಿ ಹೇಳಿಕೊಂಡಿತ್ತು. ಆದರೆ, ಚಿತ್ರತಂಡಕ್ಕೆ ಇದು ಇಷ್ಟವಾಗಿಲ್ಲ. ನಾವು ಚಿತ್ರ ಮಾಡಿರುವುದು ವೀಕ್ಷಕರಿಗಾಗಿ. ಜನ ಥಿಯೇಟರ್​ಗಳಿಗೆ ಬಂದು ಚಿತ್ರವನ್ನು ನೋಡಬೇಕು. ಆವಾಗ ಮಾತ್ರ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತಾಗುತ್ತೆ ಎಂದಿದೆ ಚಿತ್ರ ತಂಡ.

ಇನ್ನು ಸವಾರಿ, ಪೃಥ್ವಿ ಚಿತ್ರದ ಬಳಿಕ ಜಾಕೋಬ್ ವರ್ಗೀಸ್​ 'ಚಂಬಲ್' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಎನ್ ದಿನೇಶ್ ರಾಜಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ನಟ ನೀನಾಸಂ ಸತೀಶ್​, ಸೋನು ಗೌಡ, ಲೂಸಿಯಾ ಪವನ್ ಕುಮಾರ ಸೇರಿದಂತೆ ಕೆಲವರು ನಟಿಸಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು