• A
  • A
  • A
ದರ್ಶನ್ - ಸುದೀಪ್ ಹೆಸರಿನಲ್ಲಿ ಸಿನಿಮಾ... ಚಿತ್ರತಂಡ ಹೇಳೋದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸುದೀಪ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇವರಿಬ್ಬರೂ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಬ್ಬರ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.


ಹೊಸ ನಿರ್ದೇಶಕ ರಂಜಿತ್ ಎಂಬುವರು 'ದಚ್ಚು ದೀಪು' ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಸಿನಿಮಾಗೆ 'ಫ್ಯಾನ್ಸ್ ನೀವ್ ಅನ್ಕಂಡಗಲ್ಲ ನಾವು' ಎಂಬ ಉಪಶೀರ್ಷಿಕೆ ಕೂಡಾ ಇಡಲಾಗಿದೆ. ಚಿತ್ರದ ಟೈಟಲ್ ಹಾಗೂ ಟ್ಯಾಗ್​​ಲೈನ್ ದರ್ಶನ್ ಹಾಗೂ ಸುದೀಪ್ ಇಬ್ಬರನ್ನೂ ಬಿಂಬಿಸುತ್ತಿದ್ದರೂ ಈ ಸಿನಿಮಾಗೂ ದರ್ಶನ್-ಸುದೀಪ್​​ಗೆ ಯಾವುದೇ ಸಂಬಂಧವಿಲ್ಲ ಎನ್ನುತ್ತಿದೆ ಚಿತ್ರತಂಡ.
ಈ ಹಿಂದೆ ದರ್ಶನ್ ಅವರ ಚಕ್ರವರ್ತಿ ಹಾಗೂ ಜಗ್ಗುದಾದ ಸಿನಿಮಾದಲ್ಲಿ ರಂಜಿತ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 'ದಚ್ಚು-ದೀಪು' ಸಿನಿಮಾದಲ್ಲಿ ಆನಂದ್ ಹಾಗೂ ಚಂದು ಎಂಬ ಹೊಸ ನಾಯಕರು ಆಬಿನಯಿಸುತ್ತಿದ್ದರೆ ಇನ್ನು ನಾಯಕಿಯರ ಪಾತ್ರದಲ್ಲಿ ನಿಶ್ಕಲ ಮತ್ತು ಅರ್ಚನಾ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು