• A
  • A
  • A
ರೈಲ್ವೆ ನಿಲ್ದಾಣದಲ್ಲಿ ಕೂಲಿಯನ್ನು ಕಟ್ಟಿಗೆಯಿಂದ ಹೊಡೆದು ಕೊಂದ ನಿವೃತ್ತ ಯೋಧ!

ಥಾಣೆ: ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಳುವೊಬ್ಬರನ್ನು ನಿವೃತ್ತ ಯೋಧ ಕಟ್ಟಿಗೆಯಿಂದ ಹೊಡೆದು ಸಾಯಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.


72 ವರ್ಷದ ಕಾನು ಜಾಧವ್‌ ಕೊಲೆಯಾದ ಕೂಲಿಯಾಳು. ಆರೋಪಿ ನಿವೃತ್ತ ಯೋಧ, 54 ವರ್ಷದ ಧನಂಜಯ್‌ ಕುಮಾರ್‌ ಸಿನ್ಹಾ ಎಂಬಾತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಇಲ್ಲಿನ ಖಡವಾಲಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ನೌಕಪಡೆಯ ಮಾಜಿ ನೌಕರ ಧನಂಜಯ್‌ಗೆ ಕೂಲಿಯಾಳು ಜಾಧವ್‌ ಜೊತೆಗೆ ಯಾವುದೋ ವಿಷಯವಾಗಿದೆ ವಾಗ್ವಾದ ನಡೆದಿದೆ. ಇದೇ ಕೋಪದಲ್ಲಿ ಕೂಲಿಯಾಳು ಜಾಧವ್‌ ಮೇಲೆ ಧನಂಜಯ್‌ ಕಟ್ಟಿಗೆಯಿಂದ ಹೊಡೆದಿದ್ದಾನೆ. ಪರಿಣಾಮ ಕೂಲಿಯಾಳು ಜಾಧವ್‌ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ನಿವೃತ್ತ ಯೋಧ ಧನಂಜಯ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಫೆ.16ರವರೆಗೂ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಕೋರ್ಟ್‌ ಒಪ್ಪಿಸಿದೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರದೀಪ್‌ ಕಸ್ಬೆ ತಿಳಿಸಿದ್ದಾರೆ.

ಕೊಲೆಯಾದ ಕೂಲಿಯಾಳು ಕಾನು ಜಾಧವ್‌ ಹಾಗೂ ಆರೋಪಿ ನಿವೃತ್ತ ಯೋಧ ಧನಂಜಯ್‌ ಇಬ್ಬರೂ ಇದೇ ಖಡವಾಲಿ ನಿವಾಸಿಗಳೆಂದು ಪ್ರದೀಪ್‌ ಕಸ್ಬೆ ಮಾಹಿತಿ ನೀಡಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು