• A
  • A
  • A
ಪ್ರೇಮ ಪ್ರಸ್ತಾಪ ತಿರಸ್ಕಾರ...ಯುವತಿ ಮೇಲೆ ಚಾಕುವಿನಿಂದ ಹಲ್ಲೆ

ಕಾಕಿನಾಡ: ತನ್ನ ಪ್ರೇಮ ಪ್ರಸ್ತಾಪ ತಿರಸ್ಕರಿಸಿದ ಯುವತಿಯೊಬ್ಬಳ ಮೇಲೆ ಯುವಕನೋರ್ವ ಚಾಕುವಿನಿಂದ ದಾಳಿ ಮಾಡಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದಿದೆ.


23 ವರ್ಷದ ಆಕೂರಿ ಪ್ರಸಾದ್‌ ಎಂಬಾತನೇ ಯುವತಿ ಮೇಲೆ ದಾಳಿ ಮಾಡಿದ ಆರೋಪಿಯಾಗಿದ್ದು, ಯುವತಿ ನೆರವಿಗೆ ಬಂದ ಇತರ ನಾಲ್ವರ ಮೇಲೂ ಆರೋಪಿ ಅದೇ ಚಾಕುವಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಈ ಘಟನೆಯಲ್ಲಿ ಯುವತಿ ಸೇರಿ ಐವರು ಗಾಯಗೊಂಡಿದ್ದಾರೆ.


ಎಂಬಿಎ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಶಿವರಾತ್ರಿ ನಿಮಿತ್ತ ಮಂಗಳವಾರ ರಾತ್ರಿ ಮನೆ ಪಕ್ಕದ ದೇವಸ್ಥಾನಕ್ಕೆ ತೆರಳಿದ್ದಳು. ಆಗ ಆರೋಪಿ ಪ್ರಸಾದ್‌ ಯುವತಿ ಬಳಿ ಬಂದು ತನ್ನ ಪ್ರೇಮ ಪ್ರಸ್ತಾಪವನ್ನು ಇಟ್ಟಿದ್ದಾನೆ. ಯುವತಿ ಇದನ್ನು ನಿರಾಕರಿಸಿದ್ದಾಳೆ. ಆದರೆ, ಚಾಕು ಸಮೇತ ಬಂದಿದ್ದ ಪ್ರಸಾದ್‌ ಯುವತಿ ಕುತ್ತಿಗೆಗೆ ಚಾಕು ಇರಿದಿದ್ದು, ಯುವತಿ ಗಾಯಗೊಂಡಿದ್ದಾಳೆ.

ಯುವತಿ ಮೇಲೆ ಆರೋಪಿ ದಾಳಿ ಮಾಡುತ್ತಿರುವುದನ್ನು ಕಂಡು ಪಕ್ಕದಲ್ಲಿದ್ದ ನಾಲ್ವರು ಯುವತಿಯರು ರಕ್ಷಣೆಗೆ ಬಂದಿದ್ದಾರೆ. ಆಗ ಪ್ರಸಾದ್‌ ಆ ನಾಲ್ವರ ಮೇಲೂ ಚಾಕುವಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಅವರು ಕೂಡ ಸ್ವಲ್ಪ ಗಾಯಗೊಂಡಿದ್ದಾರೆ.

ಐವರು ಗಾಯಾಳುಗಳಿಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಪ್ರಸಾದ್‌ ಕುಡಿದ ನಶೆಯಲ್ಲಿ ಈ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು