• A
  • A
  • A
ಜಗಳ ಮಾಡಿದಳೆಂದು ಗೃಹಿಣಿ ಮೇಲೆ ಗ್ಯಾಂಗ್‌ರೇಪ್‌... ಮಂಡ್ಯದಲ್ಲಿ ಹೇಯ ಕೃತ್ಯ

ಮಂಡ್ಯ: ನೆರೆಮನೆಯವರ ಜಗಳ ಗೃಹಿಣಿ ಮೇಲಿನ ಅತ್ಯಾಚಾರಕ್ಕೆ ಕಾರಣವಾದಂತಹ ಅನಾಗರಿಕ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.


ಒಂದೇ ಊರಿನ ಮೂವರು ಯುವಕರು, ಗೃಹಿಣಿಯೊಬ್ಬಳು ಜಗಳ ಮಾಡಿದ್ದಕ್ಕೆ ಕೋಪಗೊಂಡು ಆಕೆಯನ್ನು ಪುಸಲಾಯಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿಯ ಗೃಹಿಣಿಯೊಬ್ಬಳು ಗ್ರಾಮದ ಸಂಜಯ, ಬಿಡ್ಡಾ ಹಾಗೂ ರಮೇಶ್ ಎಂಬುವರ ಜೊತೆ ಜಗಳ ತೆಗೆದಿದ್ದು, ಇದರಿಂದ ಕುಪಿತಗೊಂಡಿದ್ದ ಮೂವರು ಸಮಯಕ್ಕಾಗಿ ಕಾಯುತ್ತಿದ್ದರು.

ಈ ನಡುವೆ ಜೂನ್ 4 ರಂದು ಮಹಿಳೆ ಶ್ರೀರಂಗಪಟ್ಟಣ ಸಮೀಪದ ಕರಿಘಟ್ಟಕ್ಕೆ ಪೂಜೆಗೆ ಹೋಗಿದ್ದಾಳೆ. ಪೂಜೆಗೆ ಹೋದ ವಿಚಾರ ತಿಳಿದ ದುಷ್ಕರ್ಮಿಗಳು, ಆಕೆಯನ್ನು ಕಾರಿನಲ್ಲಿ ಅಪಹರಣ ಮಾಡಿ, ಸಮೀಪದ ಗೌತಮಿ ಕ್ಷೇತ್ರದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ, ಕೃತ್ಯವನ್ನು ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾರೆ‌. ಜೊತೆಗೆ ಕರೆದಾಗ ಬರಬೇಕು ಇಲ್ಲವಾದರೆ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದು, ಇದರಿಂದ ಭಯಗೊಂಡ ಮಹಿಳೆ ಈಗ ಪೊಲೀಸರ ಮೊರೆ ಹೋಗಿದ್ದಾಳೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಶ್ರೀರಂಗಪಟ್ಟಣ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಹುಡುಕಾಟ ಆರಂಭ ಮಾಡಿದ್ದಾರೆ. ಆದರೆ ಪ್ರಕರಣದ ಆರೋಪಿಗಳು ಗ್ರಾಮ ತೊರೆದಿದ್ದು, ಗ್ರಾಮಸ್ಥರು ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೋ ಕೆಲವರಿಗೆ ವೈರಲ್ ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು