• A
  • A
  • A
ಬೆಂಗಳೂರು ಉದ್ಯಮಿ ಕಿಡ್ನಾಪ್‌ ಕೇಸ್‌...ಲೇಡಿ ಕಿಂಗ್‌ಪಿನ್‌ ಸೇರಿ ನಾಲ್ವರು ಅರೆಸ್ಟ್‌

ಬೆಂಗಳೂರು: ಮಾಜಿ ನಗರಸಭಾಧ್ಯಕ್ಷ ಮತ್ತು ಉದ್ಯಮಿಯನ್ನು ಅಪಹರಿಸಿ 60 ಲಕ್ಷ ರೂ. ಒತ್ತೆ ಹಣ ವಸೂಲಿ ಮಾಡಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಕಿಡ್ನಾಪ್ ಮಾಡಿ ಹಣ ವಸೂಲಿ ಮಾಡಿದ್ದ ನಾಲ್ವರನ್ನು ಬೆಂಗಳೂರಿನ ಯಲಹಂಕ ಪೊಲೀಸರು ಬಂಧಿಸಿದ್ದಾರೆ.


ಇಡೀ ಕಿಡ್ನಾಪ್‌ ಕೇಸ್‌ನ ಮಾಸ್ಟರ್ ಮೈಂಡ್ ಯಾರು ಅನ್ನೋದು ಗೊತ್ತಾದ್ರೆ ಆಶ್ಚರ್ಯವಾಗಬಹುದು. ಹೌದು... ಈ ಕಿಡ್ನಾಪ್ ಕೇಸ್‌ನ ಮಾಸ್ಟರ್ ಮೈಂಡ್ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಅರ್ಷಿಯಾ ಆಲಿ. ಯಲಹಂಕ ಪೊಲೀಸರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಅರ್ಷಿಯಾ ಅಲಿ, ರೇಣುಕಾ ಪ್ರಸಾದ್, ಕಾಂತರಾಜು ಮತ್ತು ಪ್ರದೀಪ್ ಎಂಬುವರ ಕೈಗೆ ಕೋಳ ತೊಡಿಸಿದ್ದಾರೆ.


ನಡೆದಿದ್ದೇನು?

ಯಲಹಂಕದಲ್ಲಿ ವಾಸವಾಗಿರುವ ಮಾಜಿ ನಗರಸಭಾ ಸದಸ್ಯ ಮಲ್ಲಿಕಾರ್ಜುನಯ್ಯ ಅಪಹರಣಕ್ಕೊಳಗಾದವರು. ಜನವರಿ 11 ರಂದು ತಮ್ಮ ಮನೆಯ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಅಡ್ಡಗಟ್ಟಿದ್ದ ನಾಲ್ವರ ತಂಡ ಮಲ್ಲಿಕಾರ್ಜುನಯ್ಯನವರನ್ನು ಅಪಹರಿಸಿತ್ತು. ಅಪಹರಣವಾದ ನಂತರ ಮಲ್ಲಿಕಾರ್ಜುನಯ್ಯ ಅವರನ್ನು ಬಾಗೇಪಲ್ಲಿಗೆ ಕರೆದೊಯ್ದು ಅಲ್ಲಿಂದ ಹೈದರಾಬಾದ್‌ನಲ್ಲಿರುವ ಅವರ ಮಗ ರವಿಕುಮಾರ್‌ಗೆ ಫೋನ್ ಮಾಡಿದ್ದರು. ಆಗ ಬರೋಬ್ಬರಿ ನೂರು ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಹಣ ಕೊಡದೇ ಹೋದರೆ ಮಲ್ಲಿಕಾರ್ಜುನಯ್ಯನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.


ಕಿಡ್ನಾಪ್‌ ಕೇಸ್‌ನ ಮಾಸ್ಟರ್ ಮೈಂಡ್ ಅರ್ಷಿಯಾ ಆಲಿ ಮತ್ತು ಅಪಹರಣಕ್ಕೊಳಗಾದ ಮಲ್ಲಿಕಾರ್ಜುನಯ್ಯ

ತಂದೆಯ ಪ್ರಾಣ ಉಳಿಸಿಕೊಳ್ಳೋಕೆ ಅಂತ ರವಿಕುಮಾರ್ 60 ಲಕ್ಷ ರೂ. ಹಣವನ್ನು ಬಾಗೇಪಲ್ಲಿಗೆ ಕೊಂಡೊಯ್ದು ಅಪಹರಣಕಾರರಿಗೆ ಕೊಟ್ಟು ತಂದೆಯನ್ನು ಬಿಡಿಸಿಕೊಂಡು ಬಂದಿದ್ದರು. ಇದಾದ ನಂತರ ಯಲಹಂಕ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಅಪಹರಣ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ಫೋಕ್ಸವ್ಯಾಗನ್‌ ಕಾರಿನ ನಂಬರ್ ಸಿಕ್ಕಿತ್ತು. ಆ ನಂಬರ್ ಆಧಾರದ ಮೇಲೆ ತನಿಖೆ ನಡೆಸಿದಾಗ ಪ್ರದೀಪ್ ಎಂಬಾತನ ಕಾರು ಅನ್ನೋದು ಸ್ಪಷ್ಟವಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದವರ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಉಳಿದ ಮೂವರನ್ನು ಬಂಧಿಸಿದ್ದಾರೆ.

ಜೆಡಿಎಸ್ ಮಹಿಳಾ ರಾಜ್ಯಾಧ್ಯಕ್ಷೆಯೇ ಕಿಂಗ್ ಪಿನ್..!

ಆರೋಪಿ ರೇಣುಕಾ ಪ್ರಸಾದ್ ಹಾಗೂ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಅರ್ಷಿಯಾ ಆಲಿ ಇಬ್ಬರು ಎದುರು ಬದುರು ಮನೆಯವರು. ಬಾಗಲೂರು ರಸ್ತೆ ಸಾತನೂರು ನಿವಾಸಿಗಳು. ಮಾಜಿ ನಗರಸಭಾಧ್ಯಕ್ಷ ಮಲ್ಲಿಕಾರ್ಜುನಪ್ಪ ರಿಯಲ್ ಎಸ್ಟೇಟ್, ಫೈನಾನ್ಸಿಯಲ್‌ ವ್ಯವಹಾರ ಮಾಡುತ್ತಿದ್ದರು. ಯಲಹಂಕ, ಕೋಗಿಲು, ಬಾಗಲೂರು ಏರಿಯಾದಲ್ಲಿ ಮಲ್ಲಿಕಾರ್ಜುನಯ್ಯ ಹೆಚ್ಚು ಹೆಸರುವಾಸಿಯಾಗಿದ್ದರು. ಪ್ರತಿಷ್ಠಿತ ರಾಜಕೀಯ ನಾಯಕರು, ಸಿನಿಮಾ ನಿರ್ದೇಶಕರು, ರಿಯಲ್ ಎಸ್ಟೇಟ್ ಏಜೆಂಟರಿಗೆ ಫೈನಾನ್ಸ್‌ ನೀಡುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದಿದ್ದ ಅರ್ಷಿಯಾ ಆಲಿ ತನ್ನ ಸ್ನೇಹಿತ ಕಾಂತರಾಜು ಜೊತೆ ಕಿಡ್ನಾಪ್‌ಗೆ ಸಂಚು ರೂಪಿಸಿದ್ದಳು. ಈ ಕಾಂತರಾಜು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ. ಚಿತ್ರದುರ್ಗದಿಂದ ಜೆಡಿಎಸ್‌ನಿಂದ ಕಣಕ್ಕೆ ಇಳಿಯಲು ನಿರ್ಧರಿಸಿದ್ದ. ಟಿಕೆಟ್ ಕೂಡ ಖಾತ್ರಿಯಾಗಿತ್ತು. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಅರ್ಷಿಯಾ ಮೂಲಕ ಟಿಕೆಟ್ ಖಾತ್ರಿಪಡಿಸಿಕೊಂಡಿದ್ದ. ಚುನಾವಣೆಗೆ ದುಡ್ಡು ಹೊಂದಿಸಲು ಈ ಕಿಡ್ನಾಪ್ ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಹರಣದ ನಂತರ ಸಿಕ್ಕಿದ್ದ 60 ಲಕ್ಷ ಹಣದಲ್ಲಿ ನಾಲ್ಕು ಜನ ಹಂಚಿಕೊಂಡಿದ್ದರು ಎನ್ನಲಾಗಿದೆ.

ಅರ್ಷಿಯಾ ಆಲಿ ಅಮಾನತು..!


ಕಿಡ್ನಾಪ್ ಪ್ರಕರಣದಲ್ಲಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಬಂಧನವಾಗುತ್ತಿದ್ದಂತೆ ಜೆಡಿಎಸ್ ಅರ್ಷಿಯಾರನ್ನು ಪಕ್ಷದಿಂದ ವಜಾ ಮಾಡಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ವಜಾಗೊಳಿಸಲಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು